Tuesday, 12 April 2011

ಒಂದೆ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ...

ಹೊರಟು ತಪ್ಪುಮಾಡಿದೆನಾ?
ಹಾಗಂತ ಕೇಳಿಕೊಂಡೆನಾದರೂ, ಅದಕ್ಕೆ ಉತ್ತರ ಹುಡುಕುವ ವ್ಯವಧಾನ ಇರಲಿಲ್ಲ. ಬೀಳುತ್ತಿರುವ ಬಿರು ಮಳೆಗೆ ದೀಪವೆಲ್ಲ ಆರಿಹೋಗಿ ಸುತ್ತಲೆಲ್ಲ ಒಂದು ಅಂಧಃಕ್ಕಾರ. ನಾ ಕುಳಿತಿರುವ ಆಟೋದ ಬೆಳಕು ಬಿರುಮಳೆಯಲ್ಲಿ ಲೀನವಾಗಿ ಹೋಗುತ್ತಿದೆ ಅನಿಸುತ್ತಿತ್ತು. ಮಳೆಯ ರಾತ್ರಿಗಳಲ್ಲಿ ಬೆಂಗಳೂರು ಇಷ್ಟು ಭಯಾನಕವಾಗಿ ಕಾಣಿಸುತ್ತದೆ ಅಂದುಕೊಂಡಿರಲಿಲ್ಲ. ಎಷ್ಟು ವಿಚಿತ್ರ ಈ ಬೆಂಗಳೂರಿನಲ್ಲಿ... ಬೆಳಿಗ್ಗೆಯಿಂದ ಉರಿ ಬಿಸಿಲಿದ್ದರೆ ಸಂಜೆಯಾಗುತ್ತಿದ್ದಂತೆ ಹುಚ್ಚು ಮಳೆ ಪ್ರಾರಂಭವಾಗಿಬಿಡುತ್ತದೆ. ಎರಡು ದಿನಗಳಿಂದ ಇದೆ ಕತೆ. ಇಂದು ಹೀಗೆ ಆಯಿತು. ಬೆಳಿಗ್ಗೆಯಿಂದ ಮನೆಯಲ್ಲೇ ಏನೋ ಓದುತ್ತ ಕುಳಿತವಳಿಗೆ ಸಂಜೆಯಾಗುತ್ತಿದ್ದಂತೆ ನೆನಪಾಗಿತ್ತು, ಎರಡು ದಿನದಲ್ಲಿ ಅಮ್ಮನ ಹುಟ್ಟಿದ ಹಬ್ಬ... ಏನೂ ಗಿಫ್ಟ್ ತೆಗೆದುಕೊಂಡಿಲ್ಲ ಅಂತ. ಮನಸ್ಸಿಗೆ ಯೋಚನೆ ಬಂದಿದ್ದೇ ರೆಡಿಯಾಗಿ ಹೊರಟೆ ಬಿಟ್ಟೆ. ಮನೆಯಿಂದ ಹೊರಟು ರಸ್ತೆಗೆ ಕಾಲಿರಿಸಿದ್ದೇ, ನನ್ನ ಹಣೆಯ ಮೇಲೆ ಬಿತ್ತು ಮಳೆಯ ದೊಡ್ಡ ಹನಿ!

ನಾನು ಆಟೋ ಹಿಡಿದು 4th block ತಲುಪುವಷ್ಟರಲ್ಲಿ ಪವರ್ ಹೋಗಿ ಪೂರ್ತಿ ಕತ್ತಲಾವರಿಸಿತ್ತು. ಶೋಪಿಂಗ್ ಗೆ ಅಂತ ಬಂದವಳಿಗೆ ಪವರ್ ಇಲ್ಲದ್ದು ನೋಡಿ ನಿರಾಶೆಯಾದದ್ದೇನೋ ನಿಜ. ಆದರೆ ಇಲ್ಲಿಯವರೆಗೆ ಬಂದು ವಾಪಸ್ ಹೋಗುವ ಮನಸ್ಸಾಗಲಿಲ್ಲ. ಕೆಲವೊಂದು ಅಂಗಡಿಗಳಲ್ಲಿ ಜನರೆಟರ್ ಓನ್ ಮಾಡಿದ್ದರೆ, ಇನ್ನೂ ಕೆಲವಲ್ಲಿ ಕ್ಯಾಂಡಲ್ ಹಚ್ಚಿದ್ದರು. ಅಂತೋ ಬೆಳಕಿತ್ತು..! ಅಂಗಡಿಯ ಒಳಗೆ ತುಂಬಾ ಜನ ಇದ್ದರು. ಶೊಪಿಂಗ್ ಗೆ ಬಂದವರ ಜೊತೆಗೆ, ಮಳೆಯಿಂದ ರಕ್ೞಣೆ ಪಡೆಯಲು ಬಂದವರೇ ಹೆಚ್ಚಿದ್ದರು. ಅಷ್ಟೊಂದು ಜನರ ಮಧ್ಯೆ ನಾನೂ ಒಬ್ಬಳಾಗಿ ಸೇರಿಕೊಂಡು ನನ್ನ ಇಷ್ಟದ ಪುಸ್ತಕದ ಅಂಗಡಿಯ ಕಡೆ ಹೆಜ್ಜೇ ಹಾಕಿದೆ.

ಅಮ್ಮ ನನ್ನಂತೆಯೇ ಪುಸ್ತಕ ಪ್ರೇಮಿ. ನಿಜ ಅಂದರೆ, ಅಮ್ಮನಿಂದಲೇ ನನಗೆ ಪುಸ್ತಕಗಳ ಗೀಳು ಹಿಡಿದದ್ದು. ಹಿಂದಿನ ವರ್ಷ ಅಮ್ಮನ ಹುಟ್ಟಿದ ದಿನದಂದು ಸೀರೆ ಕೊಟ್ಟಿದ್ದೆ. 'ಪಪ್ಪನೂ ಸೀರೆನೆ ಕೊಡ್ತಾರೆ, ಎಷ್ತೊಂದು ಸೀರೆ ಇದೆ ಗೊತ್ತಾ? ಹಬ್ಬಕ್ಕೊಂದು ಸೀರೆ.. ಬೇರೆ ಏನಾದ್ರೂಕೊಡ್ಬಾರ್ದಾ?'  ಅಮ್ಮ ಹೇಳಿದ್ದರು. ಅಮ್ಮ ಎಷ್ಟೆ ಹೇಳಿದರೂ ಪಪ್ಪ ತರೋದು ಸೀರೆನೆ. ಅದಿಕ್ಕೆ ಈ ಸಾರಿ ನಾನು ಪುಸ್ತಕ ಕೊಡೋಣ ಅಂದುಕೊಂಡಿದ್ದೆ. ಆದರೆ ಯಾವುದೇ book ಇಷ್ಟ ಆಗಲಿಲ್ಲ. ಹಿಂದಿನ ದಿನ 'ಅಂಕಿತ' ದಲ್ಲೂ ಎಲ್ಲ ಪುಸ್ತಕ ಜಾಲಾಡಿದ್ದೆ. 'ಊಹುಂ' ಹೊಸದಾಗಿ ಬಿಡುಗಡೆಯಾದ ಎಲ್ಲ books ಅಪ್ಪ ತಂದಿರ್ತಾರೆ. ನಿರಾಶೆಯಿಂದ ಪುಸ್ತಕದಂಗಡಿಯಿಂದ ಹೊರ ಬಂದವಳಿಗೆ ಮೊದಲು ಕಾಣಿಸಿದ್ದೇ ice cream. 'ಛೆ! ಎಷ್ಟು ದಿನ ಆಯ್ತಲ್ವಾ ಇಂತದೊಂದು ಮಳೆ ಬೀಳುತ್ತಿದ್ದಾಗ ice cream ತಿನ್ನುತ್ತಾ ಮಳೆ ನೋಡುತ್ತಾ enjoy ಮಾಡಿ'.  ಅಂತ ಯೋಚಿಸುತ್ತಲೇ ice cream shop ನೊಳಕ್ಕೆ ಕಾಲಿರಿಸಿದ್ದೆ. ನನ್ನ ಇಷ್ಟದ ಚೊಕಲೇಟ್ ಐಸ್ ಕ್ರೀಮ್ ತೆಗೆದುಕೊಂಡು ಹತ್ತಿರಲ್ಲೇ ಇದ್ದ ಕಂಬವೊಂದಕ್ಕೆ ಓರಗಿನಿಂತು ಐಸ್ ಕ್ರೀಮ್ ತಿನ್ನುತ್ತಾ ಸುರಿಯುವ ಮಳೆಯನ್ನು ನೋಡುತ್ತಾ ನನ್ನ ಯೋಚನೆಯಲ್ಲಿ ಮುಳುಗಿದೆ...

ಅಮ್ಮನಿಗೆ ಏನು ಗಿಫ್ಟ್ ಕೊಡಲಿ? ತಮ್ಮ ಏನು ತರಬಹುದು? ಪಪ್ಪ ಯಾವ ಕಲರ್ ಸೀರೆ ತೆಗೆದುಕೊಂಡಿದಾರೋ ಏನೋ? ಎಲ್ಲರೂ surprise ಕೊಡಕ್ಕೆ ಕಾದಿರುತ್ತಾರೆ. ಆದರೆ ನಾನು ಏನು ಕೊಡಲಿ?! ಅಮ್ಮನ್ನೇ ಕೇಳಿ ಬಿಡ್ತಿನಿ ನಿನಗೇನು ಬೇಕು ಅಂತ..! ಛೆ! ನಾನೇ ಏನಾದ್ರೂ ತೆಗೆದುಕೊಂಡು ಹೋಗಿದ್ರೆ ನಾನು surprise ಕೊಡಬಹುದಿತ್ತು....

'ಸ್ವಲ್ಪ ಒಳಗೆ ಬನ್ನಿ ಮಳೆ ನೀರು ಸಿಡಿತಾ ಇದೆ' ನನ್ನ ಹಿಂದೆ ನಿಂತ ಹುಡುಗನೊಬ್ಬ ತಣ್ಣಗಿನ ದನಿಯಲ್ಲಿ ಹೇಳಿದ. ತಿರುಗಿ ಒಮ್ಮೆ ಅವನ ಮುಖ ನೋಡಿದವಳು, 'ಪರವಾಗಿಲ್ಲ. ಇಲ್ಲೆ ಚೆನ್ನಾಗಿದೆ' ಅಂತ ಹೇಳಿ ಮತ್ತೆ ಮಳೆಯ ಕಡೆ ಮುಖ ಮಾಡಿದೆ. ನನ್ನ ಯೋಚನಾ ತಹರಿ ಮುಂದುವರೆದಿತ್ತು... ಏನು ಗಿಫ್ಟ್ ಕೊಡಲಿ?!!

ಕೈಯ್ಯಲ್ಲಿರುವ ಐಸ್ ಕ್ರೀಮ್ ಮುಗುಯುತ್ತಿದ್ದಂತೆ ನನ್ನ ಯೋಚನೆಗೂ ಕಡಿವಾಣ ಬಿತ್ತು. ಆದರೆ ಏನು ತೆಗೆದುಕೊಳ್ಳಲಿ? ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗಲೇ ಇಲ್ಲ. ಟೈಮ್ ನೋಡಿದೆ ಆಗಲೇ ಎಂಟು ಗಂಟೆ. ಧಾರಾಕಾರ ಮಳೆ... ಇನ್ನು ಆಟೋ ಹಿಡಿದು ಮನೆ ತಲುಪಲು ಮಹಾ ಸಾಹಸ ಮಾಡಬೇಕಿತ್ತು. ಮಳೆಯಲ್ಲೇ ಅಂಗಡಿಯಿಂದ ಹೊರ ಬಂದು ಆಟೋಗಾಗಿ ಹುಡುಕಾಡಿದೆ. ನನ್ನ ಅದೃಷ್ಟವೋ ಏನೋ ತಕ್ೞಣ ಒಂದು ಆಟೋ ಸಿಕ್ಕಿತು. ಹಾಗೇ ನಾನು ಆಟೋ ಹತ್ತುವ ಎರಡು ಮೂರು ನಿಮಿಷಗಳ ಮಧ್ಯೆ ಒಂದು ಘಟನೆ ಘಟಿಸಿತು. ಐಸ್ ಕ್ರೀಮ್ ತಿನ್ನುವಾಗ ನನ್ನ ಹಿಂದೆ ನಿಂತಿದ್ದ ಹುಡುಗ ಗಡಿಬಿಡಿಯಲ್ಲಿ ನನ್ನ ಹತ್ತಿರ ಬಂದು 'ಒಳಗಡೇನೆ ಬಿಟ್ಟು ಬಂದಿದ್ರಿ ಮೇಡಮ್' ಅಂತ ಒಂದು ಕವರ್ ನನ್ನ ಕೈಯ್ಯಲ್ಲಿಟ್ಟಿದ್ದ. 'ಇದು ನಂದಲ್ಲ' ಅಂತ ಹೇಳುವ ಮೊದಲೇ 'ಹುಶಾರಾಗಿ ಹೋಗಿ' ಅಂತ ಹೇಳಿ ಒಂದು ತಣ್ಣನೇಯ smile ಕೊಟ್ಟು ಆ ಮಳೆಯ ಕತ್ತೆಲೆಯಲ್ಲಿ ಲೀನವಾಗಿದ್ದ. ಆಟೋ ಹತ್ತಿ ಕುಳಿತವಳಿಗೆ ಆ ಕವರ್ ತೆಗೆದು ನೋಡುವ ವ್ಯವಧಾನ ಇರಲಿಲ್ಲ. ಬೇಗ ಮನೆ ತಲುಪಿದರೆ ಸಾಕಿತ್ತು.

ಮನೆಗೆ ಬಂದು ಊಟ ಮುಗಿದ ಮೇಲೆ 'ಛೆ, ಯಾರದೋ ಏನೋ' ಅಂತ ಅಂದುಕೊಳ್ಳುತ್ತಲೇ ಕವರ್ ಓಪನ್ ಮಾಡಿದ್ದೆ. ಒಳಗೊಂದು ಪುಟ್ಟ ಬಾಕ್ಸ್, ಅದರಲ್ಲೊಂದು ಸುಂದರವಾದ ಇಯರ್ ರಿಂಗ್! ಜೊತೆಗೊಂದು ಪುಟ್ಟ ಕಾರ್ಡ್. ಓಪನ್ ಮಾಡಿದೆ....
 'ಹಾಯ್, ಈ ಇಯರ್ ರಿಂಗ್ ನಿಮಗೆ ಚೆನ್ನಾಗಿ ಓಪ್ಪುತ್ತೆ ಅನಿಸಿತು ತೆಗೆದುಕೊಂಡೆ. ತೆಗೆದುಕೊಂಡಮೇಲೆ ಕೊಡಬೇಕು ಅನಿಸಿತು. ನಿಮಗೂ ಇಷ್ಟ ಆಗುತ್ತೆ ಅನ್ಕೋತಿನಿ. ಅಮ್ಮನಿಗೆ birthday ಗೆ ಬೆಳ್ಳಿಯ ಸಿಂಧೂರದ ಬಟ್ಟಲು ಕೊಡಿ ಖುಷಿ ಪಡ್ತಾರೆ. ಅವರಿಗೆ ನೀವು ಅಂದರೆ ತುಂಬಾ ಇಷ್ಟ ಅನಿಸುತ್ತೆ!' ಅಂತ ಬರೆದಿತ್ತು.
ಷಾಕ್ ಆಯಿತು..!
ತಣ್ಣಗಿನ smile ಮಾಡಿ ಹೋದ ಹುಡುಗನ ಮುಖ ಜ್ಞಾಪಕಕ್ಕೆ ಬಂತು. ಅವನಿಗೆ ಹೇಗೆ ತಿಳಿಯಿತು ನಮ್ಮಮ್ಮನ birthday ಅಂತ?! ಓ! ಬುಕ್ ಸ್ಟಾಲ್ ಇಂದ ಹೊರಗಡೆ ಬರುತ್ತಿದ್ದಂತೆ ನನ್ನ ಪ್ರೆಂಡ್ ಜೊತೆ ಮಾತನಾಡಿದ್ದೆ... ಹಾಗಿದ್ದರೆ ಅವ್ನು ನನ್ನ ಹಿಂಬಾಲಿಸ್ತಾ ಇದ್ನಾ? ಛೆ, ಎಂತವರೆಲ್ಲ ಇರ್ತಾರಪ್ಪ ಅಂತ ಅಂದುಕೊಳ್ತಾನೇ ಆ ವಿಷಯ ಅಲ್ಲಿಗೆ ಬಿಟ್ಟೆ. ಆದರೆ ಮಾರನೆ ದಿನ ನಾನು ಅಮ್ಮನಿಗೆ ಅಂತ ತೆಗೆದುಕೊಂಡುದ್ದು ಮಾತ್ರ 'ಬೆಳ್ಳಿಯ ಸಿಂಧೂರದ ಬಟ್ಟಲು!'

ಅಂದು ಅಮ್ಮನ ಹುಟ್ಟಿದ ದಿನ. ಕೊನೆಯದಾಗಿ ನಾನು ವಿಷ್ ಮಾಡಿ ಗಿಫ್ಟ್ ಕೊಟ್ಟೆ. ಅಮ್ಮ ಖುಷಿಯಿಂದ ನನ್ನ ತಬ್ಬಿದ್ದರು. ಅವರ ಕಣ್ಣು ತುಂಬಿ ಬಂದಿತ್ತು. 'ಎಷ್ಟೊಂದು ಅಮೂಲ್ಯವಾದ ಉಡುಗೋರೆ ಕೊಟ್ಟೆ ಮಗಳೆ ' ಅಂತ ಅಪ್ಪ ಹೊಗಳಿದ್ದರು. ನನಗೆಂತಹುದೋ ಸಮಾಧಾನ..!

ಇಂದು ಸುಮ್ಮನೇ ಕುಳಿತು ಇದನ್ನೆಲ್ಲ ನೆನಪಿಸಿಕೊಳ್ತಾ ಇದಿನಿ. ಅವತ್ತು ಅಮ್ಮ ಅಷ್ಟು ಖುಷಿ ಪಡಕ್ಕೆ ನಾನು ಕಾರಣಾನಾ? ಆ ಹುಡುಗನಾ? ನಿಜವಾಗಲೂ ಅವ್ನು ಯಾರು? ಯಾಕೆ ಬಂದ? ಊಹೂಂ ಗೊತ್ತಿಲ್ಲ. ಅಮ್ಮನ ಹುಟ್ಟಿದ ದಿನದ ಖುಷಿಗೆ ಒಂದು ರೀತಿಯಲ್ಲಿ ಅವ್ನೂ ಕಾರಣ!! ತಕ್ೞಣ ಅವನು ಕೊಟ್ಟ ಆ ಇಯರ್ ರಿಂಗ್ ನೆನಪಾಯ್ತು. ಇವತ್ತು ಹಾಕಿಗೋ ವೈಟ್ ಡ್ರೆಸ್ ಗೆ ಅದು ಒಪ್ಪುತ್ತೆ ಅನಿಸಿತು ಹಾಕಿಕೊಂಡೆ...!
'ಯಾವುದೇ ಇದು ಹೊಸ ಇಯರ್ ರಿಂಗ್? ಚೆನ್ನಾಗಿದೆ. ನಿನ್ಗೆ ತುಂಬಾ ಚೆನ್ನಾಗಿ ಕಾಣತ್ತೆ. ನೀನೆ ತಗೊಂಡ್ಯೋ, ಯಾರಾದರೂ ಗಿಫ್ಟ್ ಮಾಡಿದ್ರೋ?' ಅಂತ ನನ್ನ ಗೆಳತಿಯೊಬ್ಬಳ್ಳು ತುಂಟ ನಗು ನಗುತ್ತಾ ಇದ್ಲು. ಏನಂತ ಹೇಳಲಿ ಅವಳಿಗೆ? ತಕ್ೞಣ ಒಂದು ಹಾಡು ಜ್ಞಾಪಕಕ್ಕೆ ಬಂತು. 'ಒಂದೆ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ ಮುಂದ ಮುಂದ ಮುಂದಕ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ...'  ಆ ಹುಡುಗನ ಮುಖ ನನ್ನ ಕಣ್ಣ ಮುಂದೆ ತೇಲಿ ಹೋಯಿತು....

15 comments:

  1. ನಿಮ್ಮ ಆಕಸ್ಮಿಕ ಭೇಟಿಯ ಈ ಲೇಖನ ಸೊಗಸಾಗಿದೆ, ಹಾಗೂ ಲೇಖನದ ಧಾಟಿ ಕೂಡ. ಆ ನಿಮ್ಮ ಹುಡುಗನ "ಸ್ಮೈಲ್" ನಂತೆಯೇ!!! ಅಭಿನಂದನೆಗಳು.

    ReplyDelete
  2. SATHYAPRASAD BV,

    dhanyavadagalu sir... nanna barahakke modalu abhipraya thilisidavaru nive thumba dhanyavaadagalu...

    ReplyDelete
  3. thank u so much.. nanna baraha mecchirodikke..

    ReplyDelete
  4. ಸಂಕೀರ್ತನಾ.....
    ನಿಮ್ಮೀ ಬರಹವನ್ನು ಓದಿದಾಗ "ನೀ ಹಿಂಗ ನೋಡಬ್ಯಾಡಾ ನನ್ನ" ದ ಪುಟಗಳು ನೆನಪಾದವು...
    ಅದರಲ್ಲೂ ಇಂಥಾದ್ದೇ ಸಾಲುಗಳು..
    ಸೊಗಸಾಗಿ ಬರೆದಿದ್ದೀರಿ.
    gift ಗಳನ್ನು select ಮಾಡೋದೂ ಕೂಡಾ ಒಂದು ಕಲೆ.....

    ಚನ್ನಾಗಿದೆ ಇಷ್ಟವಾಯ್ತು...

    ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು...

    ReplyDelete
  5. ಚೆನ್ನಾಗಿದೆ. ಬರೆಯುತ್ತಾ ನೀವು ತುಂಬಾ ಯಶಸ್ಸನ್ನು ಕಾಣಿರೆಂದು ಆಶಿಸುವೆ. - ಸದಾನಂದ

    ReplyDelete
  6. Chennagide San.... :)
    Heege barita iri.

    ReplyDelete
  7. hey simply superb.. the way you presented it is really really nice... keep writing :)

    ReplyDelete
  8. HegdeG,

    dhanyavaadagalu HG..:) nimma prothsaha heege irali...

    ವಾಣಿಶ್ರೀ ಭಟ್,
    thank u so much vanishree...

    ReplyDelete
  9. abba ee padagalagnu anubavisidare aa soundara'vaada preethi'ya anubhuthi aaguthade......:)
    Dear ur gift'd :) :) :)

    ReplyDelete
  10. ಸಂಕೀರ್ತನ,
    ತುಂಬ ನವಿರಾದ ಭಾವನೆಗಳು. ಮೊದಲ ಬರವಣಿಗೆಯಲ್ಲೇ ಭರವಸೆ ಮೂಡಿಸಿದ್ದೀರ.
    ಅಮ್ಮನಿಗೆ ಒಳ್ಳೆ ಕಾಣಿಕೆ ನೀಡಿದಿರಿ. Great!!

    ನಿಮ್ಮ ಬರವಣಿಗೆ ಹೀಗೆ ಮುಂದುವರಿಯಲಿ. All the best

    ReplyDelete
  11. nsru,

    thanks for ur concern... nimma prothsaha, abhimana heege irali... once again thank u so much...

    ReplyDelete
  12. ಫಕ್ಕನೆ ತುಂಬಾ ಅಪ್ತವಾಗಿ ಬಿಡುವ ನಿಮ್ಮ ಬರವಣಿಗೆ
    ಸುಂದರವಾಗಿದೆ..
    ನಿಜಕ್ಕೂ ಇಷ್ಟವಾಯಿತು.
    ಬರೀತಾ ಇರಿ..

    ReplyDelete
  13. ಓದಿ ಖುಷಿಯಾಯ್ತು.... ಬರೀತಿರಿ.....

    ReplyDelete